ಐಶ್ವರ್ಯ ರಜನಿಕಾಂತ್ ಧನುಷ್ (ಜನನ: ಜನವರಿ ೧ ೧೯೮೨ ) ಭಾರತದ ಚಲನಚಿತ್ರ ನಿರ್ದೇಶಕಿ. ಇವರು ಖ್ಯಾತ ನಟ ರಜನಿಕಾಂತ್ ರ ಹಿರಿಯ ಮಗಳು. ತಮ್ಮ ಪತಿ ಧನುಷ್ ನಟಿಸಿದ 3 (೨೦೧೨) ಚಿತ್ರದ ಮೂಲಕ ನಿರ್ದೇಶಕಿಯಾಗಿ ಪಾದಾರ್ಪಣೆಯನ್ನು ಮಾಡಿದರು. ಇವರು ಕೆಲವೊಮ್ಮೆ ಹಿನ್ನೆಲೆ ಗಾಯನವನ್ನು ಮಾಡಿದ್ದಾರೆ. ಆಗಸ್ಟ್ ೨೦೧೬ ರಲ್ಲಿ, ಐಶ್ವರ್ಯ ಯುಎನ್ ವುಮೆನ್ ಸಂಸ್ಥೆಗೆ ಭಾರತದ ಸದ್ಭಾವನೆಯ ರಾಯಭಾರಿ ಆಯ್ಕೆಯಾದರು.ಆದರೆ ಅವರ ನೃತ್ಯ ಪ್ರದರ್ಶನ ಶೀಘ್ರದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಟೀಕೆಗೆ ಗುರಿಯಾಯಿತು. ಶಾಸ್ತ್ರೀಯ ನೃತ್ಯ ಪ್ರದರ್ಶನದ ಮೇಲೆ ನಿಷೇಧ ಹೇರಿದ್ದಾರೆ ಎಂಬ ಕಥೆಗಳನ್ನು ಪ್ರಮುಖ ಪತ್ರಿಕೆಗಳು ಪ್ರಕಟಿಸಿದ್ದವು. ಕೆಲವರು ಡಿಎಂಕೆ ಆಡಳಿತದ ಅವಧಿಯಲ್ಲಿ ನೀಡಲಾಗಿದ್ದ ಕಲೈಮಾಮಣಿ ಪ್ರಶಸ್ತಿಯನ್ನು ನಿಜವಾಗಿಯೂ ಅವರ ಪ್ರತಿಭೆಯನ್ನು ನೋಡಿಯೇ ಕೊಟ್ಟರೆ ಎಂದು ಪ್ರಶ್ನಿಸಿದರು. == ವೈಯಕ್ತಿಕ ಜೀವನ == ಐಶ್ವರ್ಯ ನಟ ರಜನಿಕಾಂತ್ ಮತ್ತು ಲತಾ ರಂಗಾಚಾರಿಯವರ ಮಗಳಾಗಿ ಜನಿಸಿದರು. ಇವರ ಕಿರಿಯ ಸಹೋದರಿ ಸೌಂದರ್ಯರವರು ಕೂಡ ತಮಿಳು ಚಿತ್ರರಂಗದಲ್ಲಿ ವೃತ್ತಿ ನಿರತರಾಗಿದ್ದಾರೆ . ಐಶ್ವರ್ಯರವರು ಚಿತ್ರನಟ ಧನುಷ್ರನ್ನು ಮದುವೆಯಾಗಿದ್ದಾರೆ., ಇವರಿಗೆ ಇಬ್ಬರು ಗಂಡು ಮಕ್ಕಳು, ಯಾತ್ರ (ಜನನ ೨೦೦೬) ಮತ್ತು ಲಿಂಗ (ಜನನ ೨೦೧೦). ಇವರು ಸ್ಟಾರ್ ವಿಜಯ್ ನೃತ್ಯ ಸ್ಪರ್ಧೆ ಜೋಡಿ ನಂ ೧ ರ ಮೂರನೆ ಆವೃತ್ತಿಯಲ್ಲಿ ನಟರಾದ ಸಂಗೀತಾ ಮತ್ತು ಜೀವ ಜೊತೆಗೆ ತೀರ್ಪುಗಾರರಾಗಿದ್ದರು . ಇವರು ಸಿಲಂಬರಸನ್ ರ ಜೋತೆ ವಿಷ​ಲ್ ಚಿತ್ರಕ್ಕಾಗಿ ಹಾಡಿದ ಹಾಡಿನ ಮೂಲಕ ಹಿನ್ನೆಲೆ ಗಾಯಕಿಯಾದರು ನಂತರ ಆಯಿರತ್ತಿಲ್ ಒರುವನ್ ಚಿತ್ರದ " ಉನ್ ಮೇಲ ಆಸದಾನ್" ಹಾಡನ್ನು ಹಾಡಿದರು, ಇವರು ಈ ಚಿತ್ರಕ್ಕೆ ಸಹಾಯಕ ನಿರ್ದೇಶಕಿಯಾಗಿಯು ಕೆಲಸ ಮಾಡಿದ್ದರು. ಆಗಸ್ಟ್ ೨೦೧೧ ರಲ್ಲಿ ಐಶ್ವರ್ಯರವರು ತಮ್ಮ ಪತಿ ಮತ್ತು ಶ್ರುತಿ ಹಾಸನ್ ರನ್ನು ೩ ಶೀರ್ಷಿಕೆಯಲ್ಲಿ ತಮ್ಮ ಮೊದಲ ಚಲನಚಿತ್ರ ನಿರ್ದೇಶಿಸುವುದಾಗಿ ಪ್ರಕಟಿಸಿದರು, ಮತ್ತು ಧನುಷ್ ರವರು ಇದು ತಾವು ತಮ್ಮ ಪತ್ನಿಯ ನಿರ್ದೇಶನದಲ್ಲಿ ನಟಿಸುತ್ತಿರುವ ಏಕೈಕ ಚಿತ್ರ ಎಂದು ಖಚಿತಪಡಿಸಿದರು.ತಮ್ಮ ಸಂಬಂಧಿ ಅನಿರುದ್ಧ್ ರವಿಚಂದರ್ ಸಂಯೋಜಿಸಿದ ಚಿತ್ರದ " ವೈ ದಿಸ್ ಕೊಲವೆರಿ ಡಿ" ಹಾಡು ವೈರಲ್ ಆದ ನಂತರ ಚಿತ್ರ ಬಿಡುಗಡೆಗೂ ಮುನ್ನವೇ ಬಹಳಸ್ಟು ನಿರೀಕ್ಷೆ ಮೂಡಿಸಿತು . ಮೇಕಿಂಗ್ ವಿಡಿಯೋದಲ್ಲಿ ಪ್ರಮುಖ ನಟರು ಮತ್ತು ಸಂಯೋಜಕರೊಂದಿಗೆ ಕಾಣಿಸಿಕೊಂಡರು.ಜುಲೈ ೨೦೧೫ ರಲ್ಲಿ, ಐಶ್ವರ್ಯ ಅವರ "ಟೆನ್ ಎನ್ಟರ್ಟೆನ್ಮೆಂಟ್" ಬ್ಯಾನರ್ನಡಿಯಲ್ಲಿ ಮೂಲ ವಿಷಯಗಳು ಮತ್ತು ಮಹತ್ವಾಕಾಂಕ್ಷಿ ಚಿತ್ರನಿರ್ಮಾಪಕರ ಕಿರುಚಿತ್ರಗಳನ್ನು ಉತ್ತೇಜಿಸಲು ಯೂ ಟ್ಯೂಬ್ ಚಾನಲ್ ಆರಂಭಿಸುವುದಾಗಿ ಘೋಷಿಸಿದರು. ಡಿಸೆಂಬರ್ ೨೦೧೬ ರಲ್ಲಿ, ಐಶ್ವರ್ಯ ಆರ್ ಧನುಷ್ "ಸ್ಟಾಂಡಿಂಗ್ ಆನ್ ಏನ್ ಆಫಲ್ ಬಾಕ್ಸ್: ದಿ ಸ್ಟೋರಿ ಆಫ್ ಅ ಗರ್ಲ್ ಅಮಾಂಗ್ ದಿ ಸ್ಟಾರ್ಸ್" ಎಂಬ ತಮ್ಮ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದರು. ಈ ಪುಸ್ತಕದಲ್ಲಿ , ಐಶ್ವರ್ಯ ಸ್ಟಾರ್ ನ ಮಗಳಾಗಿರುವ ತಮ್ಮ ಕಥೆಯನ್ನು, ತಮ್ಮ ವೃತ್ತಿ ಆಯ್ಕೆ, ತಮ್ಮ ಮದುವೆ ಮತ್ತು ಈ ಯುಗದಲ್ಲಿ ಮಹಿಳೆಯಾಗಿರುವುದರ ಬಗ್ಗೆ ಹೇಳಿದ್ದಾರೆ. ಓದುಗರಿಗೆ ರಜನಿಕಾಂತ್ ರ ಮಗಳಾಗಿ ತಮ್ಮ ಜೀವನದ ಬಗ್ಗೆ ಆಳವಾಗಿ ಬರೆದ್ದಿದ್ದಾರೆ. ಧನುಷ್ ರೊಂದಿಗೆ ಪ್ರೀತಿ ಮತ್ತು ಮಕ್ಕಳನ್ನು ಬೆಳೆಸುವ ಬಗ್ಗೆ ಅತ್ಯದ್ಭುತವಾಗಿ ಪ್ರಸ್ತಾಪಿಸಿದ್ದಾರೆ, == ಪ್ರಶಸ್ತಿಗಳು == ಐಶ್ವರ್ಯ ತಮ್ಮ ನೃತ್ಯಕ್ಕಾಗಿ ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ ಪಡೆದರು. ೨೦೧೨ ರಲ್ಲಿ ಅವರು ಮಹಿಳಾ ಸಾಧಕರ ಅವಾರ್ಡ್ಸ್ನಲ್ಲಿ ವರ್ಷದ ವಾರ್ತಾ-ವಿಷಯಕ ಪ್ರಶಸ್ತಿ ಪಡೆದರು. == ಟೀಕೆಗಳು == ಇವರು ಅಂತಾರಾಷ್ಟ್ರೀಯ ಮಹಿಳಾ ದಿನದಂದು ವಿಶ್ವಸಂಸ್ಥೆಯ ಕಾರ್ಯಾಲಯದಲ್ಲಿ ಭರತನಾಟ್ಯ ಪ್ರದರ್ಶನ ಮಾಡಿದರು.ಆದರೆ ಇವರ ನೃತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ವೃತ್ತಿಪರ ಭರತನಾಟ್ಯ ನೃತ್ಯಗಾರರಲ್ಲಿ ಅನೇಕ ಟೀಕೆಗಳನ್ನು ಪಡೆಯಿತು. . == ಚಲನಚಿತ್ರಗಳ ಪಟ್ಟಿ == === ನಿರ್ದೆಶಕಿಯಾಗಿ === == ==